ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ

Language : Kannada | Palace | Audios

General Information

ಸಮಯ :

  • 10:00 ರಿಂದ 05:30 ಗಂಟೆಯವರೆಗೆ
  • ವಾರದ ಎಲ್ಲಾ ದಿನಗಳಲ್ಲಿ ತೆರೆದಿರುತ್ತದೆ.

ಟಿಕೆಟ್ :

  • ವಯಸ್ಕರಿಗೆ  :  ರೂ. 15/-
  • ಮಕ್ಕಳು : 15 ವರ್ಷಗಳ ಕೆಳಗೆ  : ಉಚಿತ
  • ವಿದೇಶಿ ಪ್ರವಾಸಿಗರಿಗೆ  : ರೂ. 150 / –
  • ಪ್ರವೇಶ ದ್ವಾರದಲ್ಲಿ ಟಿಕೆಟ್ಗಳನ್ನು ಮಾರಾಟ ಮಾಡಲಾಗುತ್ತದೆ.

ಪ್ರವೇಶವಿಲ್ಲದ ವಸ್ತುಗಳು :

ಆಹಾರ ವಸ್ತುಗಳು  : ಒಳಗೆ ಆಹಾರ ಒಯ್ಯಲು ಅನುಮತಿ ಇಲ್ಲ.

Facilities

ಶೌಚಾಲಯ :

ಅರಮನೆಯ ಆವರಣದಲ್ಲಿ ಶೌಚಾಲಯಗಳ ವ್ಯವಸ್ಥೆ ಇದೆ.

ಪಾದರಕ್ಷೆಗಳ ಸ್ಟ್ಯಾಂಡ್ :

ನಿಮ್ಮ ಪಾದರಕ್ಷೆಗಳನ್ನು ಧರಿಸಿಕೊಂಡ ಒಳಗೆ ಹೋಗಬಹುದು. ನಿರ್ಬಂಧಗಳಿಲ್ಲ.

ಸಂಗ್ರಹ ಕೊಠಡಿ :

ನಿಮ್ಮ ಸಾಮಾನುಗಳನ್ನು ಇರಿಸಲು ಲಾಕರ್ ಸೌಲಭ್ಯ ಇಲ್ಲ.

ಪಾರ್ಕಿಂಗ್ :

ಅರಮನೆಯ ಪ್ರವೇಶ ಗೇಟ್ ಬಳಿ ಕಾರ್ ಪಾರ್ಕಿಂಗ್ ಸಮಸ್ಯೆ ಇದೆ. ನೀವು ಸ್ವಲ್ಪ ಮುಂದೆ ಎಲ್ಲಿಯಾದರೂ ಪಾರ್ಕ್ ಮಾಡಬೇಕು.

Food

ಅರಮನೆಯು ನಗರದ ಮಧ್ಯಭಾಗದಲ್ಲಿದೆ. ಅರಮನೆಯಿಂದ ವಾಕಿಂಗ್ ದೂರದಲ್ಲಿ ಅನೇಕ ಹೋಟೆಲ್ಗಳು ಲಭ್ಯವಿರುತ್ತವೆ.

Checklist

  • ನಿಮ್ಮ ಇಯರ್ ರ್ಫೋನ್ ಗಳನ್ನೂ ಕೊಂಡೊಯ್ಯಿರಿ.
  • ಸಾಧ್ಯವಾದರೆ ಮೊಬೈಲ್ ನ ಒಂದು ಎಕ್ಸ್ಟ್ರಾ ಬ್ಯಾಟರಿ ಯನ್ನು ಕೊಂಡೊಯ್ಯಿರಿ.
  • ನೀವು ನಮ್ಮ ಆಪ್ ಅನ್ನು ಕೇಳುವಾಗ ನಿಮ್ಮ ಇಂಟರ್‍ನೆಟ್ ಅನ್ನು ಆಫ್ ಮಾಡಿದ್ದಲ್ಲಿ ನೀವು ನಿಮ್ಮ ಬ್ಯಾಟರಿಯನ್ನು ಉಳಿಸಬಹುದು.

History

ಬೆಂಗಳೂರಿನ ಬೇಸಿಗೆ ಅರಮನೆಯು ಒಂದು ಸಣ್ಣ ಅರಮನೆಯಾಗಿದೆ. ರಾಜರ ಅಸ್ತಿತ್ವದಲ್ಲಿದ್ದ ಒಟ್ಟು ಅರಮನೆಯ 1/3 ನೇ ಭಾಗ ಮಾತ್ರ ಉಳಿದಿದೆ.ಅರಮನೆಯು ತೇಗದ ಮರದಿಂದ ಮಾಡಲ್ಪಟ್ಟಿದೆ. ಈ ಮರವು ಈ ಪ್ರದೇಶದಲ್ಲಿ ಸ್ಥಳೀಯವಾಗಿ ಕಂಡುಬರುತ್ತದೆ ಮತ್ತು ಅದರ ಬಾಳಿಕೆಗೆ ಹೆಸರುವಾಸಿಯಾಗಿದೆ.