ಬೇಲೂರು ಚೆನ್ನಕೇಶವ

Language : Kannada | Temple | Audios

General Information

ಸಮಯ :

ದೇವಾಲಯ ವಾರದ ಎಲ್ಲಾ ದಿನಗಳಲ್ಲಿ ತೆರೆದಿರುತ್ತದೆ.

ಟಿಕೆಟ್ :

ಪ್ರವಾಸಿ ಪ್ರವೇಶ ಉಚಿತ.

ಉಡುಗೆ ಕೋಡ್ :

 • ಪ್ಯಾಂಟ್, ಶರ್ಟ್, ಟಿ ಶರ್ಟ್ಸ್ , ಜೀನ್ಸ್ ಪ್ಯಾಂಟ್, ಸಾಂಪ್ರದಾಯಿಕ ಉಡುಗೆ ಸೂಕ್ತವೆನಿಸಿದರೆ.
 • ಅನುಮತಿಸಲಾಗುವುದಿಲ್ಲ :   ಲುಂಗಿ , ಸಣ್ಣ ಪ್ಯಾಂಟ್ಪ್ರ

ವೇಶವಿರುವ ವಸ್ತುಗಳು :

 • ಕ್ಯಾಮೆರಾ : ಕ್ಯಾಮೆರಾ ಕೊಂಡೊಯಲು ದೇವಾಲಯದಲ್ಲಿ ಅವಕಾಶ ಇದೆ. ಫೋಟೋಗಳನ್ನು ಗರ್ಭಗುಡಿಯ ಬಳಿ ತೆಗೆಯಲು ಅನುಮತಿ ಇಲ್ಲ.
 • ಫೋನ್ಸ್ : ನಿಮ್ಮ ಫೋನ್ ಅನ್ನು ಸೈಲೆಂಟ್ ಮೋಡ್ ಅಲ್ಲಿ ಇರಿಸಿ.
 • ಕುಡಿಯುವ ನೀರು : ಕುಡಿಯುವ ನೀರನ್ನು ನೀವೇ ಕೊಂಡೊಯ್ಯಿರಿ.

ಪ್ರವೇಶವಿಲ್ಲದ ವಸ್ತುಗಳು :

ಆಹಾರ ವಸ್ತುಗಳು :ಒಳಗೆ ಆಹಾರ ಒಯ್ಯಲು ಅನುಮತಿ ಇಲ್ಲ.

Facilities

ಶೌಚಾಲಯ :

ದೇವಾಲಯದ ಆವರಣದ ಒಳಗೆ ಶೌಚಾಲಯದ ವ್ಯವಸ್ತೆ ಇಲ್ಲ

ಪಾದರಕ್ಷೆಗಳ ಸ್ಟ್ಯಾಂಡ್ :

ಪ್ರವೇಶದ್ವಾರದಲ್ಲಿ ಪಾದರಕ್ಷೆಗಳ ಸ್ಟ್ಯಾಂಡ್ ಇದೆ.

ಸಂಗ್ರಹ ಕೊಠಡಿ :

ನಿಮ್ಮ ಸಾಮಾನುಗಳನ್ನು ಇರಿಸಲು ಲಾಕರ ಸೌಲಭ್ಯ ಇಲ್ಲ

ಪಾರ್ಕಿಂಗ್ :

ಕಾರ್ ಪಾರ್ಕಿಂಗ್ ಸೌಲಭ್ಯ ಇದೆ

Food

ಬೇಲೂರು ಒಂದು ಸಣ್ಣ ಪಟ್ಟಣ. ಇಲ್ಲಿ ತಿಂಡಿ ಅಥವಾ ಊಟಕ್ಕೆ ಹೆಚ್ಹು ಉಪಾಹಾರ ಗ್ರಹಗಳು ಲಭ್ಯವಿಲ್ಲ. ಇಲ್ಲಿ ಲಭ್ಯವಿರುವ ಕೆಲವು ಉಪಾಹಾರ ಗ್ರಹಗಳ ಹೆಸರು ಕೆಳಗಿನಂತಿದೆ :

ಅಗ್ಗದ ದಕ್ಷಿಣ ಭಾರತೀಯ ಆಹಾರ

 • ವಿಷ್ಣು ರೆಸಿಡೆನ್ಸಿ
 • ಹೋಟೆಲ್ ಮಯೂರ ವೇಳಪುರಿ ( KSTDC ಹೋಟೆಲ್)

Checklist

 • ಇದು ಒಂದು ತೆರೆದ ಪ್ರದೇಶ. ಇಲ್ಲಿ ವರ್ಷ ಕಾಲಾವಧಿ ಸೆಕೆ ಇರುವುದು. ಛತ್ರಿ ಅಥವಾ ಟೋಪಿಯನ್ನು ನಿಮ್ಮ ಜೊತೆ ತೆಗೆದುಕೊಂಡು ಹೋಗಿ.
 • ದೇವಸ್ಥಾನವನ್ನು ನೋಡಲು, ಸಾಧ್ಯವಾದರೆ ಒಂದು ಟಾರ್ಚ್ನ್ ನ್ನು ಕೊಂಡೊಯ್ಯಿರಿ.
 • ನಿಮ್ಮ ear ಫೋನ್ ಗಳನ್ನೂ ಕೊಂಡೊಯ್ಯಿರಿ.
 • ಸಾಧ್ಯವಾದರೆ ಮೊಬೈಲ್ ನ ಒಂದು ಎಕ್ಸ್ಟ್ರಾ ಬ್ಯಾಟರಿ ಯನ್ನು ಕೊಂಡೊಯ್ಯಿರಿ.

The Basics

ಈ ಮೂಲಗಳ ಮೂಲಕ ನಮ್ಮ ನೆನಪನ್ನು ತಾಜಾಗೊಳಿಸೋಣ. ದಕ್ಷಿಣ ಭಾರತದಲ್ಲಿ, ಸುಮಾರು ಎಲ್ಲ ಪ್ರಮುಖ ಸ್ಮಾರಕಗಳು ಹಾಗೂ ದೇವಾಲಯಗಳೂ ಕೂಡ ದೇವರು, ದೇವತೆಗಳು ಹಾಗೂ ಪೌರಾಣಿಕ ಕಥೆಗಳಿಗೆ ಸಂಬಂಧ ಪಟ್ಟಿರುತ್ತದೆ. ಇವುಗಳನ್ನು ತಿಳಿಯುವುದರಿಂದ ಕಲಾಕಾರರ ಕೆತ್ತನೆ ಕೆಲಸಗಳನ್ನು ಪ್ರಶಂಸಿಸಲು ಸಹಾಯವಾಗುವುದು.

History

ಈ ದೇವಾಲಯವು ಸುಮಾರು ೯೦೦ ವರ್ಷ ಹಳೆಯದು. ಈ ಅದ್ಭುತ ದೇವಾಲಯವನ್ನು ನಿರ್ಮಿಸಲು ಹಾಗೂ ಸಂಪೂರ್ಣವಾಗಿ ಮುಗಿಸಲು ೧೦೩ ವರ್ಷಗಳು ಬೇಕಾಯಿತು.  ಇದು ವಿಷ್ಣುವಿಗೆ ಮೀಸಲಾಗಿರುವ ಭವ್ಯವಾದ ದೇವಾಲಯ. ಇಲ್ಲಿ ವಿಷ್ಣುವಿನ ಸ್ತ್ರೀ ಅವತಾರವಾದ ಮೋಹಿನಿಯ ರೂಪದಲ್ಲಿ ದೇವರನ್ನು ಪೂಜೆ ಮಾಡುವುದು ಒಂದು ವಿಶಿಷ್ಟವಾದ ಸಂಗತಿ. ರಾಕ್ಷಸನಾದ ಭಸ್ಮಾಸುರನನ್ನು ಕೊಲ್ಲಲು ವಿಷ್ಣು ಏಕೆ ಮೋಹಿನಿಯ ಅವತಾರ ಎತ್ತಿದನು ಎನ್ನುವುದಕ್ಕೆ ಇಲ್ಲೊಂದು ಸುಂದರವಾದ ಕಥೆ ಇದೆ.  ಇದರ ಬಗ್ಗೆ ನಾವು ನಮ್ಮ ಆಡಿಯೋ ಗೈಡ್ ನಲ್ಲಿ ಕೇಳೋಣ. ಚೆನ್ನ ಹಾಗೂ ಕೇಶವ ಎನ್ನುವ ಎರಡು ಶಬ್ಧಗಳು ಸೇರಿ ಚೆನ್ನಕೇಶವ ಎನ್ನುವ ಹೆಸರು ಬಂದಿದೆ. ಸ್ಥಳೀಯ ಭಾಷೆಯಲ್ಲಿ ಚೆನ್ನ ಎಂದರೆ ಸುಂದರ ಹಾಗೂ ಕೇಶವ ಎನ್ನುವುದು ವಿಷ್ಣುವಿನ ಒಂದು ಹೆಸರು. ಹಾಗಾಗಿ ಚೆನ್ನಕೇಶವ ಎಂದರೆ ಸುಂದರ ವಿಷ್ಣು  ಎಂದರ್ಥ.