Mysuru Palace

Language : Kannada | Palace | Audios

General Information

ಅರಮನೆಯ  ಸಮಯ : 10:00 AM – 05:30 PM ಮೈಸೂರು ಅರಮನೆಯು ವಾರದ ಎಲ್ಲಾ ದಿನಗಳಲ್ಲಿ ತೆರೆದಿರುತ್ತದೆ.

ಅರಮನೆಯ  ಪ್ರವೇಶ ಶುಲ್ಕ :

  • ವಯಸ್ಕರು :  ರೂ. 50/-
  • ಮಕ್ಕಳು : 10 – 18  ವರ್ಷ  : ರೂ. 30 / –
  • ಮಕ್ಕಳು : 10 ವರ್ಷಗಳ ಕೆಳಗೆ  : ಉಚಿತ
  • ವಿದೇಶಿ ಪ್ರವಾಸಿಗರಿಗೆ  : ರೂ. 50 / –

ಪ್ರವೇಶವಿಲ್ಲದ ವಸ್ತುಗಳು : ಆಹಾರ ವಸ್ತುಗಳನ್ನು ಅರಮನೆಯ ಒಳಗೆ ಒಯ್ಯುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ.

Facilities

ಕಾರ್ ಪಾರ್ಕಿಂಗ್ : ಅರಮನೆಯ ಪ್ರವೇಶ ಗೇಟ್ ಬಳಿ ಕಾರ್ ಪಾರ್ಕಿಂಗ್ ವ್ಯವಸ್ಥೆ ಇದೆ.

ಶೌಚಾಲಯಗಳು : ಅರಮನೆಯ ಆವರಣದಲ್ಲಿ ಶೌಚಾಲಯಗಳ ವ್ಯವಸ್ಥೆ ಇದೆ.

ಪಾದರಕ್ಷೆ :

  • ಅರಮನೆಯ ಒಳಗೆ ನೀವು ಪಾದರಕ್ಷೆಯನ್ನು ಧರಿಸಿ ಹೋಗುವಂತಿಲ್ಲ. ಅರಮನೆಯನ್ನು ಪ್ರವೇಶಿಸುವ ಮೊದಲು ಪಾದರಕ್ಷೆಯ ಸ್ಟ್ಯಾಂಡ್ ಇದೆ. ಇಲ್ಲಿ ನೀವು ನಿಮ್ಮ ಪಾದರಕ್ಷೆಗಳನ್ನು ಬಿಟ್ಟು ಹೋಗಬೇಕು.
  • ಇದು ಉಚಿತವಾಗಿದೆ (Free Service).

ಖರೀದಿ :

  • ಸರ್ಕಾರದ ಅನುಮತಿ ಪಡೆದಿರುವ ಹಲವಾರು ಅಂಗಡಿಗಳು ಅರಮನೆಯ ಆವರಣದಲ್ಲಿ ಇವೆ. ಪ್ರವಾಸದ ನಂತರ ಅರಮನೆಯಿಂದ ಹೊರಗೆ ಹೋಗುವಾಗ ನೀವು ಈ ಅಂಗಡಿಗಳನ್ನು ನೋಡಬಹುದು.
  • ಕಾವೇರಿ ಎಂಪೋರಿಯಂ ಕೂಡ ಈ ಆವರಣದಲ್ಲಿಯೇ ಇದೆ. ವಿದೇಶಿಯರಿಗೆ ಕೂಡ ಖರೀದಿಗೆ ಇದು ಒಂದು ಉತ್ತಮವಾದ ಸ್ಥಳವಾಗಿದೆ. ಈ ಎಲ್ಲಾ ಅಂಗಡಿಗಳಲ್ಲಿಯೂ ವಸ್ತುಗಳ ಬೆಲೆಯು ನಿಗದಿತವಾಗಿರುತ್ತದೆ.

 

Food

ದಕ್ಷಿಣ ಭಾರತೀಯ ಆಹಾರ :

  • ಹೋಟೆಲ್ ಒರಿಜಿನಲ್ ವಿನಾಯಕ ಮೈಲಾರಿ : ದಕ್ಷಿಣ ಭಾರತೀಯ ಉಪಹಾರ ಶಾಪ್ ನಂ. 79, ಪೋಲಿಸ್ ಸ್ಟೇಷನ್ ಹತ್ತಿರ, ನಜರ್ಬಾದ್ ಮುಖ್ಯ ರಸ್ತೆ, ಮೈಸೂರು, ಕರ್ನಾಟಕ-570010.

 

  • ಹೋಟೆಲ್  ದಾಸಪ್ರಕಾಶ್ : ದಕ್ಷಿಣ ಭಾರತೀಯ ಸಾಂಪ್ರದಾಯಿಕ ಆಹಾರ ಗಾಂಧಿ ಸ್ಕ್ವೇರ್, ಪ್ರಭಾ ಟಾಕೀಸ್ ಎದುರು, ಮೈಸೂರು.

ಉತ್ತರ ಭಾರತೀಯ ಆಹಾರ :

  • ಪುರೋಹಿತ್ ರೆಸ್ಟೋರೆಂಟ್  – ಮುಂಬೈ/ಮಾರವಾಡಿ ಥಾಲಿ : ಎಂ ಟಿ ಆರ್ ಡೀಲಕ್ಸ್ ಲಾಡ್ಜ್ ಕಾಂಪ್ಲೆಕ್ಸ್, ಸಂಗಮ್ ಟಾಕೀಸ್ ಹಿಂದೆ, ಗಣಪತಿ ದೇವಸ್ಥಾನ ರಸ್ತೆ, ಲಷ್ಕರ್ ಮೊಹಲ್ಲ, ಮೈಸೂರು .  ಫೋನ್: 094829 51770.

 

  • ಹೊಸ ಬಾಂಬ್ ಟಿಫಿನ್ಸ್ – ಚಾಟ್ ಮತ್ತು ಸ್ವೀಟ್ ಶಾಪ್ : ದೇವರಾಜ ಮಾರುಕಟ್ಟೆ ಕಟ್ಟಡ, ಸಯ್ಯಾಜಿ ರಾವ್ ರೋಡ್, ಮೈಸೂರು. ಫೋನ್: 098457 28883

Checklist

  • ಅರಮನೆಯಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಳ್ಳಲು, ಅರಮನೆಗೆ ಹೋಗುವ ಮೊದಲು ಅರಮನೆಯ ವೆಬ್ ಸೈಟ್ ನ್ನು http://www.mysorepalace.gov.in/ ನೀವು ಪರಿಶೀಲಿಸಬಹುದು.
  • ನಿಮ್ಮ ಜೊತೆ ಇಯರ್ ಫೋನ್ / ಹೆಡ್ ಫೋನ್ ಅನ್ನು ಒಯ್ಯಿರಿ.
  • ನಿಮ್ಮ ಜೊತೆ ಎರಡು ಮೊಬೈಲ್ ಬ್ಯಾಟರಿಯನ್ನು ಒಯ್ಯಿರಿ.
  • ಡೇಟಾ ನೆಟ್ವರ್ಕ್: ನಿಮ್ಮ ಮೊಬೈಲ್ ನ ಡೇಟಾ ನೆಟ್ವರ್ಕ್ ಅನ್ನು ನೀವು ಆಫ್ ಮಾಡಿ ಇಟ್ಟರೆ ನಿಮ್ಮ ಮೊಬೈಲ್ ನ ಬ್ಯಾಟರಿಯು ತುಂಬಾ ದೀರ್ಘ ಸಮಯದ ತನಕ ಇರುವುದು. ಹಾಗಾಗಿ ಆಡಿಯೋ ಗೈಡ್ ಅನ್ನು ಉಪಯೋಗಿಸುವ ಸಮಯದಲ್ಲಿ ನೀವು ಡೇಟಾ ನೆಟ್ವರ್ಕ್ ನ್ನು ಆಫ್ ಮಾಡಬೇಕಾಗಬಹುದು.

The Basics

ಈ ಮೂಲಗಳ ಮೂಲಕ ನಮ್ಮ ನೆನಪನ್ನು ತಾಜಾಗೊಳಿಸೋಣ. ದಕ್ಷಿಣ ಭಾರತದಲ್ಲಿ, ಸುಮಾರು ಎಲ್ಲ ಪ್ರಮುಖ ಸ್ಮಾರಕಗಳು ಹಾಗೂ ದೇವಾಲಯಗಳೂ ಕೂಡ ದೇವರು, ದೇವತೆಗಳು ಹಾಗೂ ಪೌರಾಣಿಕ ಕಥೆಗಳಿಗೆ ಸಂಬಂಧ ಪಟ್ಟಿರುತ್ತದೆ. ಇವುಗಳನ್ನು ತಿಳಿಯುವುದರಿಂದ ಕಲಾಕಾರರ ಕೆತ್ತನೆ ಕೆಲಸಗಳನ್ನು ಪ್ರಶಂಸಿಸಲು ಸಹಾಯವಾಗುವುದು.

History

ತಾಜಮಹಲ್ ನಂತರ ಮೈಸೂರು ಅರಮನೆಯು ಭಾರತದ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಇಲ್ಲಿಗೆ ವಾರ್ಷಿಕವಾಗಿ 4 ದಶ ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ. ಇವತ್ತು ನೀವೇನು ನೋಡುತ್ತಿದ್ದೀರೋ ಅದು ನಾಲ್ವಡಿ ಕೃಷ್ಣರಾಜ ಒಡೆಯರು 1912 ರಲ್ಲಿ ಕಟ್ಟಿಸಿದ ಹೊಸ ಅರಮನೆ. ಬೆಂಕಿಯಿಂದ ಸುಟ್ಟು ಭಸ್ಮವಾಗಿದ್ದ ಹಳೆಯ ಅರಮನೆಯ ಬದಲು ಹೊಸ ಅರಮನೆಯನ್ನು ನಿರ್ಮಿಸಲು ಬ್ರಿಟಿಷರ ವಾಸ್ತು ಶಿಲ್ಪಿ ಲಾರ್ಡ್ ಹೆನ್ರಿ ಇರ್ವಿನ್ ನನ್ನು ನಿಯೋಜಿಸಲಾಯಿತು. 18 ನೆಯ ಶತಮಾನದ ಅಧಿಕಾರದ ಅಸ್ತಿತ್ವದಲ್ಲಿ ಬಳಸಲಾಗುತ್ತಿದ್ದ ಅದೇ ಹಳೆಯ ಸ್ಥಳದಲ್ಲಿ ಹೊಸ ಅರಮನೆಯನ್ನು ನಿರ್ಮಿಸಲಾಯಿತು.

ಪ್ರಸ್ತುತ ಅರಮನೆಯ ನಿರ್ಮಾಣ ಕಾರ್ಯಕ್ಕೆ ಸುದೀರ್ಘ 15 ವರ್ಷಗಳೇ (1897-1912) ಬೇಕಾದವು. ಈ ಅರಮನೆಯ ನಿರ್ಮಾಣದ ವೆಚ್ಚ ಸುಮಾರು 42 ಲಕ್ಷ. ಒಂದು ದೃಷ್ಟಿ ಕೋನದಿಂದ ನೋಡುವುದಿದ್ದರೆ, ಈ ಖರ್ಚಿನ ಮೌಲ್ಯ ಇವತ್ತಿನ ದಿನದಲ್ಲಿ 39,000 ಕೋಟಿ ರೂಪಾಯಿಗಳು.