ಶ್ರೀ ಸೋಮೇಶ್ವರ ಸ್ವಾಮಿ ದೇವಸ್ಥಾನ

Language : Kannada | Temple | Audios

General Information

Timings :

 ಬೆಳಿಗ್ಗೆ 6:೦೦ ರಿಂದ 12:೦೦ ರವರೆಗೆ ಮತ್ತು 4:೦೦ ರಿಂದ 9:೦೦ ರವರೆಗೆ.

Entry charges :

ಪ್ರವಾಸಿ ಪ್ರವೇಶ ಉಚಿತ.

Facilities

Parking :

ಹಳೆಯ ನಗರದ ಪ್ರದೇಶದ ಕಿರಿದಾದ ಹಾದಿಗಳಲ್ಲಿ 4 ಚಕ್ರ ವಾಹನಗಳ ಪಾರ್ಕಿಂಗ್ ಈ ಪ್ರದೇಶದಲ್ಲಿ ಕಷ್ಟಕರವಾಗುತದೆ. ನೀವು ಸಮೀಪದ ಪ್ರದೇಶಗಳಲ್ಲಿ ಪಾರ್ಕಿಂಗ್ ಹುಡುಕಿ ನಂತರ ದೇವಾಲಯದ ಒಳಗೆ ಹೋಗಬೇಕು.

Toilets :

ಸಾರ್ವಜನಿಕ ಬಳಕೆಗಾಗಿ ದೇವಾಲಯದ ಆವರಣದಲ್ಲಿ ಶೌಚಾಲಯಗಳು ಲಭ್ಯವಿದೆ.

Shoe stand :

ದೇವಾಲಯದ ಹೊರಗಡೆ ಒಂದು ಶೂ ಸ್ಟ್ಯಾಂಡ್ ಇದೆ.

Food

ಅಲಸೂರು ನಗರದ ಮಧ್ಯಭಾಗದಲ್ಲಿದೆ.ಸಾಕಷ್ಟು ಹೋಟೆಲ್ಗಳು ಲಭ್ಯವಿವೆ.

History

ಸೋಮೇಶ್ವರ ದೇವಸ್ಥಾನವು ಬೆಂಗಳೂರಿನ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಮುಖ್ಯ ದೇವಸ್ಥಾನವನ್ನು ಚೋಳ ಸಾಮ್ರಾಜ್ಯದ ಅವಧಿಯಲ್ಲಿ ನಿರ್ಮಿಸಲಾಗಿದೆ ಎಂದು ಭಾವಿಸಲಾಗಿದೆ, ಆದರೆ ಪ್ರಭಾವಶಾಲಿ ” ರಾಜಗೋಪುರ ” ಮತ್ತು ” ದೇವಾಲಯದ ಗೋಡೆಗಳನ್ನು ” ಬೆಂಗಳೂರಿನ ಸಂಸ್ಥಾಪಕರಾದ ಕೆಂಪೇಗೌಡ ಅವರು ನಿರ್ಮಿಸಿದರು. ಭವ್ಯವಾದ ವಾಸ್ತುಶಿಲ್ಪವನ್ನು ಹೊಂದಿರುವ ಸೊಮೇಶ್ವರ ದೇವಸ್ಥಾನದ ರಾಜಗೋಪುರ ಮತ್ತು ಧವಜಸ್ತಂಭಗಳು ಇಂದಿಗೂ ಸಹ ಹೊಳೆಯುತ್ತಿದೆ.