ಶ್ರೀ ಗೊಮ್ಮಟೇಶ್ವರ (ಶ್ರವಣಬೆಳಗೊಳ)

Language : Kannada | Temple | Audios

General Information

ಸಮಯ :

  • ೬:೦೦ AM ರಿಂದ  ೫:೩೦PM
  • ದೇವಾಲಯ ವಾರದ ಎಲ್ಲಾ ದಿನಗಳಲ್ಲಿ ತೆರೆದಿರುತ್ತದೆ.

ಟಿಕೆಟ್ :

ಪ್ರವಾಸಿ ಪ್ರವೇಶ ಉಚಿತ.

Facilities

ಶೌಚಾಲಯ :

ಬೆಟ್ಟದ ಬುಡದಲ್ಲಿದೆ, ದುಡ್ಡು ಕೊಟ್ಟು ಬಳಸಬಹುದು.

ಪಾದರಕ್ಷೆಗಳ ಸ್ಟ್ಯಾಂಡ್ :

  • ಪಾದರಕ್ಷೆ ಸ್ಟಾಂಡ್ ಬೆಟ್ಟದ ಬುಡದಲ್ಲಿದೆ ಅಲ್ಲಿ ದುಡ್ಡುಕೊಟ್ಟು ಟೋಕನ್ ತೆಗೆದು ಕೊಳಬೇಕು
  • ಬಿಸಿಲಿರುವುದರಿಂದ ಬೆಟ್ಟ ತುಂಬ ಕಾದಿರುತ್ತದೆ ಆದ್ದರಿಂದ ಸಾಕ್ಸ್ ಹಾಕಿಕೊಂಡು ಹತ್ತುವುದು ಒಳ್ಳೆಯದು

ಸಂಗ್ರಹ ಕೊಠಡಿ :

ನಿಮ್ಮ ಸಾಮಾನುಗಳನ್ನು ಇರಿಸಲು ಲಾಕರ್ ಸೌಲಭ್ಯ ಇಲ್ಲ.

ಪಾರ್ಕಿಂಗ್ :

ಅದಕ್ಕೆಂದೇ ಪ್ರತ್ಯೇಕವಾದ ಸ್ಥಳವಿಲ್ಲ, ನೀವು ಎಲ್ಲಾದರೂ ನಿಲ್ಲಿಸಬಹುದು, ಎಲ್ಲಿ ನಿಲ್ಲಿಸಿದರೂ ತುಂಬ ಹತ್ತಿರವಾಗುತ್ತದ್ದೆ.

Food

ಕಲ್ಯಾಣಿ ಹಾಗೂ ಆರ್ಚ್ ಹತ್ತಿರ ಹಲವು ಹೋಟೆಲ್‍ಗಳಿವೆ

ಹೋಟೆಲ್ ರಘು : ಬಹಳ ಸ್ವಚ್ಚ ಹಾಗೂ ಅಚ್ಚುಕಟ್ಟಾಗಿದೆ.

ಉತ್ತರ ಭಾರತ ಶೈಲಿಯ ಹಾಗೂ ಜೈನರ ಶೈಲಿಯ ಊಟ ಕಲ್ಯಾಣಿ ಹತ್ತಿರ ದೊರೆಯುತ್ತದೆ.

Checklist

  • ಇದು ಒಂದು ತೆರೆದ ಪ್ರದೇಶ. ಇಲ್ಲಿ ವರ್ಷ ಕಾಲಾವಧಿ ಸೆಕೆ ಇರುವುದು. ಛತ್ರಿ ಅಥವಾ ಟೋಪಿಯನ್ನು ನಿಮ್ಮ ಜೊತೆ ತೆಗೆದುಕೊಂಡು ಹೋಗಿ.
  • ನಿಮ್ಮ ಇಯರ್  ರ್ಫೋನ್ ಗಳನ್ನೂ ಕೊಂಡೊಯ್ಯಿರಿ.
  • ಸಾಧ್ಯವಾದರೆ ಮೊಬೈಲ್ ನ ಒಂದು ಎಕ್ಸ್ಟ್ರಾ ಬ್ಯಾಟರಿ ಯನ್ನು ಕೊಂಡೊಯ್ಯಿರಿ. ನೀವು ನಮ್ಮ ಆಪ್ ಅನ್ನು ಕೇಳುವಾಗ ನಿಮ್ಮ ಇಂಟರ್‍ನೆಟ್ ಅನ್ನು ಆಫ್ ಮಾಡಿದ್ದಲ್ಲಿ ನೀವು ನಿಮ್ಮ ಬ್ಯಾಟರಿಯನ್ನು ಉಳಿಸಬಹುದು.

The Basics

ಈ ಮೂಲಗಳ ಮೂಲಕ ನಮ್ಮ ನೆನಪನ್ನು ತಾಜಾಗೊಳಿಸೋಣ. ದಕ್ಷಿಣ ಭಾರತದಲ್ಲಿ, ಸುಮಾರು ಎಲ್ಲ ಪ್ರಮುಖ ಸ್ಮಾರಕಗಳು ಹಾಗೂ ದೇವಾಲಯಗಳೂ ಕೂಡ ದೇವರು, ದೇವತೆಗಳು ಹಾಗೂ ಪೌರಾಣಿಕ ಕಥೆಗಳಿಗೆ ಸಂಬಂಧ ಪಟ್ಟಿರುತ್ತದೆ. ಇವುಗಳನ್ನು ತಿಳಿಯುವುದರಿಂದ ಕಲಾಕಾರರ ಕೆತ್ತನೆ ಕೆಲಸಗಳನ್ನು ಪ್ರಶಂಸಿಸಲು ಸಹಾಯವಾಗುವುದು.

History

ಶ್ರವಣಬೆಳಗೊಳ ಒಂದು ಸಣ್ಣ ಪಟ್ಟಣ. ಶ್ರವಣ ಬೆಳಗೊಳ, ನಿಮಗೆ ಗೊತ್ತೆ ಈ ಹೆಸರು ಹೇಗೆ ಬಂತು ಎಂದು ? ಶ್ರವಣ ಎಂದರೆ (ಸನ್ಯಾಸಿ), ಬೆಳಗೊಳ (ಬಿಳಿಕೊಳ) ಎಂಬ ಎರಡು ಪದದಿಂದ ಪಡೆಯಲಾಗಿದೆ. ಇದರ ಉಲ್ಲೇಖ ಎನೆಂದರೆ ಪಟ್ಟಣದ ಮಧ್ಯೆ ಒಂದು ಬಿಳಿ ಕೊಳದ ಮುಂದೆ ಬಾಹುಬಲಿಯ ಸುಂದರವಾದ ಮೂರ್ತಿ ಇದೆ., ಹಾಗೂ ಆ ಮೂರ್ತಿಯ ಪ್ರತಿಬಿಂಬ ಆ ನೀರಿನಲ್ಲಿ ಬಹಳ ಸ್ಪಸ್ಟವಾಗಿ ನೋಡಬಹುದು… ಹಾ! ಈ ಬೃಹತ್ ಬಾಹುಬಲಿಯ ಮೂರ್ತಿಯನ್ನು ಇಲ್ಲಿ ಗೋಮಟೇಶ್ವರ ಎಂದು ಕರೆಯುತ್ತಾರೆ.