ವಸ್ತು ಸಂಗ್ರಹಾಲಯ (ಬೆಂಗಳೂರು)

Language : Kannada | Museum | Audios

General Information

ಸಂಗ್ರಹಾಲಯದ ಸಮಯ : ಬೆಳ್ಳಿಗೆ 10 ರಿಂದ ಸಂಜೆ 5 ರ ವರೆಗೆ (ಸೋಮವಾರ ರಜಾ ದಿನ)

ಟಿಕೆಟ್ :

ಹಿರಿಯರಿಗೆ- 20 ರೂಪಾಯಿ.

ಮಕ್ಕಳಿಗೆ  – 10 ರೂಪಾಯಿ.

ಉಡುಗೆ :

ಯಾವುದೇ ತರಹದ ನಿಬಂದನೆಯಿಲ್ಲ.

ಪ್ರವೇಶವಿರುವ ವಸ್ತುಗಳು :

ಬ್ಯಾಗ್, ಉಲ್ಲೇಖದ ಪುಸ್ತಕ, ಪೋನ್, ವಾಟರ್ ಬಾಟಲ್‍ಗಳನ್ನು ತೆಗೆದುಕೊಂಡು ಹೋಗಬಹುದು.

ಪ್ರವೇಶವಿಲ್ಲದ ವಸ್ತುಗಳು :

ಕ್ಯಾಮರ, ಹಾಗೂ ತಿನಿಸುಗಳು ಇವುಗಳಿಗೆ ಒಳಗೆ ಪ್ರವೇಶವಿರುವುದಿಲ್ಲ.

Facilities

ಶೌಚಾಲಯ : ಸಾರ್ವಜನಿಕರ ಬಳಕೆಗೆ ಇಲ್ಲಿ ಶೌಚಾಲಯಗಳಿವೆ.

ಸಂಗ್ರಹ ಕೊಠಡಿ : ಇಲ್ಲಿ ನಿಮ್ಮ ವಸ್ತುಗಳನ್ನು ಇಡುವ ಸೌಲಭ್ಯವಿಲ್ಲ, ನಿಮ್ಮ ಬ್ಯಾಗ್‍ನಲ್ಲೇ ನಿಮ್ಮ ವಸ್ತುಗಳನ್ನು ಇಟ್ಟುಕೊಳ್ಳಬೇಕು.

ಪಾರ್ಕಿಂಗ್ : ಕಬ್ಬನ್ ಪಾರ್ಕ್ ಕಡೆಯಿರುವುದರಿಂದ ಸಾಕಷ್ಟು ಕಾರುಗಳನ್ನು ನಿಲ್ಲಿಸಲು ಜಾಗವಿದೆ ಅತ್ಯಲ್ಪವಾದ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

 

Food

ಸಂಗ್ರಹಾಲಯದ ಕ್ಯಾಂಟೀನ್ :

ಸಂಗ್ರಹಾಲಯದ ಕ್ಯಾಂಟೀನ್‍ನಲ್ಲಿ ನಿಮಗೆ ತಿನ್ನಲು ಸ್ಯಾಂಡ್‍ವಿಚ್, ಸಮೋಸ, ಹಾಗೂ ರೋಟಿ ಸಿಗುತ್ತದೆ.

ಕುಡಿಯಲು ಕಾಫಿ,ಟೀ, ಹಾಗೂ ತಂಪು ಪಾನೀಯ ದೊರೆಯುತ್ತದೆ.

ಮಾಂಸಹಾರಿ :

ನೀವು ಮೀನು ತಿನ್ನಲು ಇಷ್ಟಪಡುವವರಾಗಿದ್ದರೆ ನಿಮಗೆ ಅಲ್ಲಿ ಫಿಶರಿ ವಿಭಾಗದ ಬಿಲ್ಢಿಂಗ್‍ನಲ್ಲಿ ‘ಮಸ್ತ್ಯ ದರ್ಶಿನಿ’ ಎಂಬ ಹೋಟೆಲ್ ಇದೆ ವಿಧಾನ ಸೌದದ ಕಡೆಯಿಂದ ನೀವು ಕಾಲುನಡಿಗೆಯಲ್ಲಿ ಹೋದರೆ 10 ನಿಮಿಷವಾಗುವುದು.

ಇದನ್ನು ಹೊರತು ಬೇರೆ ತಿನಿಸುಗಳಿಗೆ ನೀವು ಲ್ಯವೆಲ್ಲೇ ರಸ್ತೆಗೆ ಹೋಗಬೇಕು, ವಾಹನದಲ್ಲಿ ಸುಮಾರು ಐದು ನಿಮಿಷ, ನಡೆದು ಹೋದರೆ 10 ನಿಮಿಷ ಆಗುತ್ತದೆ.

Checklist

  • ಕುಡಿಯಲು ನೀರು ತೆಗೆದುಕೊಂಡು ಹೋಗಿ.
  • ಇಯರ್ ಫೋನ್ / ಹೆಡ್‍ಫೋನ್.
  • ಸುಂದರವಾದ ಸಂಗ್ರಹಾಲಯವನ್ನು ವಿಕ್ಷಿಸಲು ಒಂದರಿಂದ ಎರಡು ಗಂಟೆ ಯಾದರೂ ಬೇಕಾಗಬಹುದು, ಹೆಚ್ಚಾಗಿ ಲಗೇಜು ಇದ್ದರೆ ನಿಮ್ಮ ಕಾರ್ ಅಥವ ಹೋಟೆಲ್‍ನಲ್ಲಿ ಇಟ್ಟಿರಿ.
  • ಪವರ್ ಬ್ಯಾಂಕ್/ ಪೋನ್ ಬ್ಯಾಟರಿ ಪ್ಯಾಕ್ ಇದ್ದರೆ ಒಳ್ಳೆಯದು.

The Basics

ನಾನು ಈ ಮೊದಲೇ ಹೇಳಿದ ಹಾಗೆ ದಕ್ಷಿಣ ಭಾರತದಲ್ಲಿ ಎಲ್ಲ ಸ್ಮಾರಕಗಳು ಹಾಗೂ ಚಿತ್ರಕಲೆಗಳು ಪುರಾಣದ ಮೂಲಭೂತವಾಗಿರುತ್ತದೆ ಆದ ಕಾರಣ ನಮಗೆ ಪುರಾಣದ ಬಗ್ಗೆ ಮಾಹಿತಿ ತಿಳಿದಿದ್ದರೆ ಈ ಶಿಲೆಗಳನ್ನು ಶಿಲ್ಪಗಳನ್ನು ನಾವು ಪ್ರಶಂಶಿಸುತ್ತೇವೆ, ಇಲ್ಲವಾದರೆ ಇದು ಬರೀ ಕಲ್ಲಿನ ಕೆತ್ತನೆಯಂತೆ ಕಾಣುತ್ತದೆ.

History

ಈ ಸಂಗ್ರಹಾಲಯವು ದೇಶದ ಹಳೆಯ ಸಂಗ್ರಹಾಲಯಗಳಲ್ಲಿ ಒಂದು, ಇದು ಸುಮಾರು 150 ವರ್ಷ ಹಳೇಯದು. ಈ ಸಂಗ್ರಹಾಲಯದಲ್ಲಿ ಈ ಕೆಳಗಿನವುಗಳಿವೆ.

ಸಂಶೋಧನ ವಿಭಾಗ :- ಮೊಹನ್‍ಜದಾರೋ, ಚಂದ್ರವಳ್ಳಿ, ಬ್ರಹ್ಮಗಿರಿ, ಸಂಶೋಧನೆಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಇವೆಲ್ಲದರ ಮಾಹಿತಿಯನ್ನು ನಮ್ಮ ಆಡಿಯೋ ಗೈಡ್ ವಿವರಿಸುತ್ತದೆ.