ಲಾಲ್ ಬಾಗ್ – ಗಾಜಿನ ಮನೆ

Language : Kannada | Garden | Audios

General Information

ಸಮಯ : 6:00 am to 7:00 pm ವಾರದ ಎಲ್ಲಾ ದಿನಗಳು.

ಟಿಕೆಟ್ಟುಗಳು :

6:00-9:00am ಹಾಗೂ  5:30-7:00pm ಮಧ್ಯೆ ಜಾಗಿಂಗ್ ಮಾಡುವ ಜನರಿಗೆ ಉಚಿತ ಪ್ರವೇಶ.

ಶಾಲಾ ಮಕ್ಕಳು ಹಾಗೂ ಅಸಹಜ ಮಕ್ಕಳಿಗೆ ಉಚಿತ ಪ್ರವೇಶ.

ಇತರರಿಗೆ, ಪ್ರವೇಶ ದರ: 20/- ರೂಪಾಯಿಗಳು ಮಾತ್ರ.

ಪ್ರವೇಶವಿಲ್ಲದ ವಸ್ತುಗಳು : ತಿಂಡಿ ತಿನಿಸುಗಳನ್ನು ಒಳಗೆ ಒಯ್ಯುವುದನ್ನು ನಿಷೇಧಿಸಲಾಗಿದೆ.

 

Facilities

ಶೌಚಾಲಯ : ಉದ್ಯಾನವನ ಆವರಣದ ಒಳಗೆ ಶೌಚಾಲಯದ ವ್ಯವಸ್ತೆ ಇದೆ.

ಸಂಗ್ರಹ ಕೊಠಡಿ : ಪ್ರವಾಸಿಗರ ಸಾಮಾನುಗಳನ್ನು ಇಡಲು ಕೊನೆಯ ವ್ಯವಸ್ಥೆ ಇಲ್ಲ.

ಪಾರ್ಕಿಂಗ್ : ಕಾರ್ ಪಾರ್ಕಿಂಗ್ ವ್ಯವಸ್ಥೆ ಇದೆ.

 

Food

ಅಗ್ಗದ ದಕ್ಷಿಣ ಭಾರತೀಯ ಆಹಾರ :

ಶೈವಾನ್ ರೆಸ್ಟೋರೆಂಟ್ : ರಾಯಲ್ ಕಾರ್ನರ್, 1/5, ಲಾಲ್ ಬಾಗ್ ರೋಡ್, ಸಂಪಂಗಿ ರಾಮ ನಗರ, ಬೆಂಗಳೂರು, ಕರ್ನಾಟಕ 560027.

MTR(ಸಸ್ಯಾಹಾರಿ): 14, ಲಾಲ್ ಬಾಗ್ ಮುಖ್ಯ ರಸ್ತೆ, ಸಂಪಂಗಿ ರಾಮ ನಗರ, ದೊಡ್ಡಮಾವಳ್ಳಿ, ಸುಧಾಮ ನಗರ, ಬೆಂಗಳೂರು, ಕರ್ನಾಟಕ  560027.

ನಂದಿನಿ ರೆಸ್ಟೋರೆಂಟ್ : 114/2, ಲಾಲ್ ಬಾಗ್ ಫೋರ್ಟ್ ರಸ್ತೆ, ಮಿನರ್ವ ಸರ್ಕಲ್, ಪಾರ್ವತಿಪುರಂ, ವಿಶ್ವೇಶ್ವರಪುರ, ಬಸವನಗುಡಿ, ಬೆಂಗಳೂರು, ಕರ್ನಾಟಕ 560004.

 

Checklist

  • ಇದು  ಒಂದು ತೆರೆದ ಪ್ರದೇಶ. ಇಲ್ಲಿ ವರ್ಷ ಕಾಲಾವಧಿ ಸೆಕೆ ಇರುವುದು. ಛತ್ರಿ ಅಥವಾ ಟೋಪಿಯನ್ನು ನಿಮ್ಮ ಜೊತೆ ತೆಗೆದುಕೊಂಡು ಹೋಗಿ.
  •  ದೇವಸ್ಥಾನವನ್ನು ನೋಡಲು, ಸಾಧ್ಯವಾದರೆ ಒಂದು ಟಾರ್ಚ್ನ್ ನ್ನು ಕೊಂಡೊಯ್ಯಿರಿ.
  • ನಿಮ್ಮ ಇಯರ್  ರ್ಫೋನ್ ಗಳನ್ನೂ ಕೊಂಡೊಯ್ಯಿರಿ.
  • ಸಾಧ್ಯವಾದರೆ ಮೊಬೈಲ್ ನ ಒಂದು ಎಕ್ಸ್ಟ್ರಾ ಬ್ಯಾಟರಿ ಯನ್ನು ಕೊಂಡೊಯ್ಯಿರಿ.

History

1760 ರಲ್ಲಿ ಹೈದರ್ ಅಲಿಯು ಈ ಉದ್ಯಾನದ ಕಟ್ಟಡವನ್ನು ಆರಂಭಿಸಿದನು, ಆದರೆ ಅವನ ಮಗ ಟಿಪ್ಪು ಸುಲ್ತಾನನು ಇದನ್ನು ಪೂರ್ಣಗೊಳಿಸಿದನು. ಹೈದರ್ ಅಲಿಯು ಆ ಕಾಲದಲ್ಲಿ ಪ್ರಸಿದ್ದಿಯನ್ನು ಗಳಿಸಿದ್ದ ಮುಘಲರ ಹೂದೋಟದ ಮಾದರಿಯಲ್ಲೇ ಈ ಉದ್ಯಾನವನ್ನು ನಿರ್ಮಿಸಲು ನಿರ್ಧರಿಸಿದನು. ಹೈದರ್ ಅಲಿಯು ಈ ಪ್ರಸಿದ್ಧ ಸಸ್ಯ ವಿಜ್ಞಾನ ಹೂದೋಟವನ್ನು (Botanical Garden) ಆರಂಭಿಸಿದನು. ಅವನ ಮಗನು ವಿವಿಧ ದೇಶಗಳಿಂದ ಮರ ಹಾಗೂ ಗಿಡಗಳನ್ನು ಆಮದು ಮಾಡಿಕೊಂಡು ಈ ಉದ್ಯಾನದ ತೋಟಗಾರಿಕಾ ಸಂಪತ್ತನ್ನು ಹೆಚ್ಚಿಸಿದನು. ತೋಟಗಾರಿಕೆಯಲ್ಲಿ ಅತ್ಯಂತ ಪಳಗಿರುವ ತಿಗಳ ಸಮುದಾಯದ ಜನರನ್ನು ಇದರ ಕೆಲಸಕ್ಕೆ ಹೈದರ್ ಅಲಿಯು ನಿಯೋಜಿಸಿದನು.

ಲಾಲ್ ಬಾಗ್ ಹೂದೋಟವು, ಬೆಂಗಳೂರಿನಿಂದ 120 ಕಿಲೋ ಮೀಟರ್ ದೂರದಲ್ಲಿ ಇದ್ದ ಒಂದು ಹಳೆಯ ನಗರವಾದ ಸಿರಾ ಎಂಬಲ್ಲಿ ಇದ್ದ ಮುಘಲರ ಉದ್ಯಾನದ ವಿನ್ಯಾಸದ ಮೇಲೆ ಆಧಾರಿತವಾಗಿದೆ.